ಒಂದು ರಾಜ್ಯ, 6 ವರೆ ಕೋಟಿ ಜನಸಂಖ್ಯೆ. ಆರುವರೆ ಕೋಟಿ ಜನರನ್ನು ಕಾಯಲು ಒಂದು ಸರ್ಕಾರ. ಆ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಸೇರಿ 35 ಸಚಿವರು, ಜನರಿಗಾಗಿ ಸೃಷ್ಟಿಯಾಗಿರುವ ಖಾತೆಗಳು.
ಆ ಖಾತೆಗಳ ನಿರ್ವಹಣೆಗೆ ನೌಕರ ವೃಂದ. ಕಛೇರಿಯ ಜವಾನ, ಕಿರಿಯ ಸಹಾಯಕ, ಹಿರಿಯ ಸಹಾಯಕ, ದ್ವಿ. ದ. ಗುಮಾಸ್ತ, ಪ್ರ.ದ. ಗುಮಾಸ್ತ, ಅಧಿಕಾರಿ ವರ್ಗಗಳೇ ಎಲ್ಲಾ ಇಲಾಖೆಗಳಲ್ಲೂ ಜನರ ಕೆಲಸಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. "ಸರ್ಕಾರಿ ಕೆಲಸ ದೇವರ ಕೆಲಸ"ದ ಆಧಾರದ ಮೇಲೆ. ರೈತರು, ಜನಸಾಮಾನ್ಯರು ತಾವು ದುಡಿದ ದುಡಿಮೆಯಲ್ಲಿ ಪೈಸೆಗಳಲ್ಲಿ ಸರ್ಕಾರ ವಿಧಿಸುವ ತೆರಿಗೆಗಳನ್ನು (ಯಾವುದೇ ಪದಾರ್ಥ ಕೊಂಡರೂ ಅದಕ್ಕೆ ತೆರಿಗೆ ಕೊಟ್ಟೇ ಕೊಡುತ್ತಾರೆ ನಮ್ಮ ಜನರು) ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜನರ ಹಣ ಸರ್ಕಾರಕ್ಕೆ ನಿರಂತರವಾಗಿ ಹೋಗುತ್ತಲೇ ಇರುತ್ತದೆ. ಈ ಜನರ ಹಣದಿಂದಲೇ ಈ ನಮ್ಮ ರಾಜ್ಯವನ್ನಾಳುವ ಮಂತ್ರಿಗಳು ನಾಗರಿಕ ಸೌಲಭ್ಯಗಳಿಗೆ ಹಣ ವಿನಿಯೋಗಿಸುತ್ತಾರೆ.
ಅದೇ ಹಣದಿಂದಲೇ "ಸರ್ಕಾರಿ ಕೆಲಸ ದೇವರ ಕೆಲಸ" ಅನ್ನೋ ಮನೋಭಾವ ಹೊಂದಿರುವ ನಮ್ಮ ಸರಕಾರಿ ನೌಕರರಿಗೂ ಒಂದೊಂದು ಪೈಸೆ ಸಂಬಳವೂ ಜನರ ತೆರಿಗೆ ಹಣದಿಂದಲೇ ಹೋಗುತ್ತದೆ. ರಾಜ್ಯ ಸರ್ಕಾರವು ಜನರಿಂದ ಸಂಗ್ರಹಿಸುವ ಹಣದಿಂದ ಶೇಕಡ 30-40 ರಷ್ಟು ಹಣವನ್ನು ನೌಕರರ ಸಂಬಳಕ್ಕೆ ವಿನಿಯೋಗಿಸಲಾಗುತ್ತದೆ.
ಸಂಬಳ, ಭತ್ಯೆಗಳು, ಮನೆ ಬಾಡಿಗೆ, ವಾಷಿಂಗ್ ಭತ್ಯೆ, ಪ್ರಯಾಣ ಭತ್ಯೆ, ಹೆರಿಗೆ ಭತ್ಯೆ, ವೈದ್ಯಕೀಯ ಭತ್ಯೆ, ಹೀಗೇ ಎಲ್ಲಾ ಭತ್ಯೆಗಳನ್ನು ಕೊಟ್ಟು, ಕಾಲಕ್ಕೆ ತಕ್ಕಂತೆ ಸಂಬಳದಲ್ಲಿ ಶೇಕಡವಾರು ಹೆಚ್ಚಿಗೆ ಮಾಡಿಕೊಂಡು (ಇದೀಗ ಬಂದ ಸುದ್ದಿಯಂತೆ ಶೇ. 15% ಮೂಲ ವೇತನದಲ್ಲಿ ಸಂಬಳ ಹೆಚ್ಚಳಮಾಡಿ ಸರ್ಕಾರ ಆದೇಶ ಹೊರಡಿಸಿದೆ) ತಮ್ಮ ಜೀವನಕ್ಕೆ ತಮ್ಮ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಿಕೊಂಡಿರುವ ಈ ರಾಜ್ಯದ ಸರಕಾರಿ ನೌಕರರು.
ಇಷ್ಟೆಲ್ಲಾ ಸವಲತ್ತುಗಳನ್ನು ಜನರ ತೆರಿಗೆ ಹಣದಿಂದಲೇ ಪಡೆಯುತ್ತಿದ್ದರೂ ಸಹ " ತಮ್ಮ ಇಲಾಖೆಗಳಲ್ಲಿ ಒಬ್ಬ ಜವಾನನಿಂದ ಹಿಡಿದು, ಎಲ್ಲಾ ವರ್ಗದ ನೌಕರರು, ಲಂಚಕ್ಕೆ ಕೈ ಚಾಚಕೊಂಡೆ "ಭಿಕ್ಷೆ" ಬೇಡುವ ಸ್ಥಿತಿಯಲ್ಲಿ ಜನರಿಂದ ಕೈ ಯೊಡ್ಡಿ, ಜನರಿಂದ ಅವನು ಬಡವನೋ, ಶ್ರೀಮಂತನೋ ಯಾರಿಗೂ ಬೇದ ಭಾವ ತೋರಿಸದೇ, ಎಲ್ಲರಿಂದಲೂ ಲಂಚಕ್ಕೆ ಕೈ ಯೊಡ್ಡುತ್ತಾ, ಕೈ ತುಂಬಾ ಸಂಬಳದ ಜೊತೆಗೆ ಲಂಚವನ್ನು ಪಡೆದು "ಸರ್ಕಾರಿ ಕೆಲಸ ತನ್ನ ಮನೆಯ ಕೆಲಸ" ಎಂಬ ದಾಟಿಯಲ್ಲಿ ಮುನ್ನಡೆಯುತ್ತಿದ್ದಾರೆ ನಮ್ಮ ಸರಕಾರಿ ನೌಕರರು, ಅದೇಕೆ ಹೀಗೆ?
ನಮ್ಮ ಸರ್ಕಾರಿ ನೌಕರ ಬಂಧುಗಳಿಗೆ ಮನಸ್ಸಾಕ್ಷಿಯೇ ಇಲ್ಲವೇ? ಸರಕಾರ ತಾವು ಮಾಡುತ್ತಿರುವ ಶ್ರಮಕ್ಕೆ ಜನರ ತೆರಿಗೆಹಣವನ್ನು ತಮ್ಮ ಕುಟುಂಬಗಳಿಗೆ ಕೊಡುತ್ತಿದೆ. ಅದು ಜನಸಾಮಾನ್ಯರ ಹಣ ಅದಕ್ಕೆ ಸರಿಯಾದ ಮಾನವೀಯತೆ ದೃಷ್ಟಿಯಿಂದ ಜನರ ಕೆಲಸ ಮಾಡಿಕೊಡದೇ ಲಂಚದ ಹಣಕ್ಕೆ ಕೈ ಚಾಚಿ ಅದರಿಂದ ತಮ್ಮ ದುರಾಸೆಯ ಜೀವನ ನಡೆಸಲು ಬಳಸಿಕೊಳ್ಳುತ್ತಿದ್ದಾರೆ. ಆ ಹಣದಿಂದ ಆಸ್ತಿ ಅಂತಸ್ತು, ಮಾಡಿಕೊಂಡು ತಾವೂ ಏನೋ ಸಾಧಿಸದ್ದೇವೆ. ಎಂಬ ಸಾಧನೆಯೊಂದಿಗೆ ಜೀವನ ನಡೆಸುತ್ತಾರಲ್ಲ. ಇದು ಮಾನವ ಧರ್ಮವೇ? ಬಹುತೇಕ ನೌಕರರು ವಿದ್ಯಾವಂತರು ನಮ್ಮ ಸರಕಾರಿ ನೌಕರ ಬಂಧುಗಳು, ಇವರಿಗೆ ಅನ್ಯಾಯ, ಅನೈತಿಕತೆಯ ಬಗ್ಗೆ ತಿಳಿದಿಲ್ಲವೇ ?
ತಾವು ಕೈಯೊಡ್ಡುವ ಲಂಚದ ಹಣವನ್ನು ಒಬ್ಬ ರೈತ, ಬಡವ ಕೊಡುವಾಗ, ತನ್ನ ಒಳಮನಸ್ಸಿನಿಂದ ನೊಂದು, ಬೆಂದು ಆ ಹಣವನ್ನು ಕೊಡುವಾಗ ಶಪಿಸಿಕೊಂಡೆ ಕೊಡುತ್ತಾರಲ್ಲ. ಅವರ ಕಣ್ಣೀರಿನ ಅವರ ನೋವಿನ ಶ್ರಮದ ಹಣ ವನ್ನು ಪಡೆದು ತಮ್ಮ ಸಂಸಾ ರದ ಹೆಂಡತಿ ಮಕ್ಕಳಿಗೆ ವಿನಿಯೋಗಿಸುವಾಗ ಆ ಬಡವನ ಕಣ್ಣೀರಿನ ಒಡಲುರಿಯ ಕಾವು ತಮ್ಮ ಕಣ್ಣ ಮುಂದೆ ಬರುವುದಿಲ್ಲವೇ?
ಒಬ್ಬ ಶ್ರೀಮಂತ, ಆ ಹಣ ಅವ್ಯವಹಾರದಿಂದ ಬಂದ ಹಣ, ಅದರಿಂದ ಎಲ್ಲೆಲ್ಲಿ ಮೋಸ ಮಾಡಿ ಹಣ ಗಳಿಸಿರುತ್ತಾರೋ ? ಹತ್ತು ರೂ ಕೊಟ್ಟು ಸಾವಿರಾರು ಹಣವನ್ನು ದುರ್ಮಾಗದಿಂದ ಗಳಿಸುತ್ತಾರೆ. ಅವರ ಪಾಪದ ಮಾರ್ಗಗಳ ಹಣದಲ್ಲಿ ತಾವುಗಳೂ ಸಹ ತಮ್ಮ ಕುಟುಂಬದೊಂದಿಗೆ ಸಹ ಪಾಲೂದಾರರಾಗುತ್ತಾರೆ. ಆ ಪಾಪಕ್ಕೆ ಪ್ರಾಯಶ್ಚಿತ ಉಂಟೇ,
ಕಚೇರಿ ಕೆಲಸಗಳಲ್ಲಿ ಜವಾನನಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ವರೆಗೂ ಬಹುತೇಕರು ಸಂಬಳಕ್ಕಿಂತ ಲಂಚಕ್ಕೆ ಕೈಯೊಡ್ಡಿಕೊಂಡೆ ದಿನವಿಡೀ ಜಾತಕ ಪಕ್ಷಿಗಳಂತೆ ಕಾಯುತ್ತಾ ತಮ್ಮ ಕೆಲಸಗಳನ್ನು ತಮ್ಮ ಮನಸ್ಸಾಕ್ಷಿಗೆ ಹೆದರದೇ
ರೋಗಿಗಳಿಂದ ಕೈಯೊಡ್ಡುತ್ತಾರೆ. ಅಂಗವಿಕಲರ ಬಳಿ ಕೈಯೊಡ್ಡುತ್ತಾರೆ, ನಿರ್ಗತಿಕ ಮಹಿಳೆಯರ, ವಿಧವಾ ವೇತನ, ವಯಸ್ಸಾದ ಹಿರಿಯರ ವೃದ್ಯಾಪ್ಯ ವೇತನ ಪಡೆಯುವ ಸಂದರ್ಭದಲ್ಲೂ ಕೈಯೊಡ್ಡುತ್ತಾರೆ. ಜನರು ತನ್ನ ಮನೆ ಖರೀದಿಸಿದರೂ, ಮಾರಲು ಹೋದಾಗಲೂ ಅಲ್ಲೂ ಕೈಯೊಡ್ಡುತ್ತಾರೆ. ಬೀದಿಗಳಲ್ಲಿ ಹೊಟ್ಟೆ ಪಾಡಿಗೆ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುವ ವ್ಯಾಪಾರಿಗಳ ಬಳಿ ಕೈಯೊಡ್ಡಿ ನಿಲ್ಲುತ್ತಾರೆ. ಎಲ್ಲೆಲ್ಲಿ ಅವಕಾಶ ಇರುತ್ತೋ ಅಲ್ಲೆಲಲ್ಲಾ ಕೈಯೊಡ್ಡಿ ನಿಲ್ಲುತ್ತಾರೆ.
ಅಲ್ಲಿ ಮಾನವೀಯತೆ ಸತ್ತು ಹೋಗಿ, ತನ್ನ ಕರಾಳ ಮುಖವನ್ನು ತನಗೆ ಅರಿವಿದ್ದೋ, ಅರಿಯದೇಯೋ ಹಣಕ್ಕಾಗಿ ಹಣದ ಬೇಟೆಗಾಗಿ ನಿಂತು ಬಿಡುತ್ತಿದ್ದಾರೆ.
ಯಾವಾಗ ಸರ್ಕಾರಿ ನೌಕರರು ತಮ್ಮ ಆತ್ಮಸಾಕ್ಷಿಯಂತೆ ಕರ್ತವ್ಯವನ್ನು ಜನಸಾಮಾನ್ಯರ ಕೆಲಸಗಳಿಗೆ ಸ್ಪಂದಿಸಿ, ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿಕೊಂಡು ಹೋದಾಗ ಮಾತ್ರ . ಈ ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುತ್ತದೆ.
ಭ್ರಷ್ಟಾಚಾರದ ಮೂಲ ಬೇರುಗಳೇ ಸರಕಾರಿ ಇಲಾಖೆಗಳು ಆ ಬೇರುಗಳನ್ನು "ನಮ್ಮ ಸರಕಾರಿ ನೌಕರರು ಕಿತ್ತು ಹಾಕಲು ಮನಸ್ಸು ಮಾಡಬೇಕು. ತಾವು ದುಡಿಯುವ ಶ್ರಮಕ್ಕೆ ತಕ್ಕಂತೆ ಜನರ ತೆರಿಗೆ ಹಣದಿಂದ ಪಡೆಯುವ ಸಂಬಳದ ಹಣವೇ ತಮ್ಮ ಆಸ್ತಿ. ಇದರಿಂದ ತನ್ನ ಸಂಸಾರವನ್ನು , ಕುಟುಂಬವನ್ನು ಕಾಪಾಡಿಕೊಂಡು ಹೋಗಬಹುದು. ಯಾವಾಗ ಈ ವಿಚಾರದಲ್ಲಿ ತಾನೂ ತನ್ನನ್ನು ತೊಡಗಿಸಿಕೊಳ್ಳುತ್ತಾನೋ, ಆವತ್ತು ತನ್ನ ತನವನ್ನು ತೋರಿಸಿಕೊಟ್ಟು, ಈ ರಾಜ್ಯದ ಅಭಿವೃದ್ಧಿಗೆ, ಭ್ರಷ್ಟಾಚಾರ ಮುಕ್ತ ರಾಜ್ಯಕ್ಕೆ ತನ್ನ ಶ್ರಮವನ್ನು ಅರ್ಪಿಸುತ್ತಾನೆ."
ಈ ನಮ್ಮ ಸರಕಾರಿ ನೌಕರರು ಯಾವಾಗ ತಮ್ಮ ತನವನ್ನು ಬಿಟ್ಟು ಲಂಚದ ಆಸೆಗೆ ಬಿದ್ದು, ಭ್ರಷ್ಟಾಚಾರಿಗಳಾಗಿ ಮಾರ್ಪಾಡಾಗುತ್ತಾರೋ. ಅದನ್ನು ಬಳಸಿಕೊಂಡು ನಮ್ಮನ್ನು ಆಳುವ ರಾಜಕಾರಣಿಗಳು ಮತ್ತಷ್ಟು ಭ್ರಷ್ಟಾಚಾರ ಪ್ರಮಾಣವನ್ನು ಹೆಚ್ಚುಸುವಲ್ಲಿ ಅವರ ಪಾತ್ರವೂ ಹೆಚ್ಚಾಗುತ್ತಾ ಹೋಗುತ್ತೆ.
ನಮ್ಮ ಸರಕಾರಿ ನೌಕರ ಬಂಧುಗಳು ಮಾಡುವ ತಪ್ಪುಗಳಿಂದ "ಭ್ರಷ್ಟಾಚಾರ ಅದೆಷ್ಟು ಅಗಾಧವಾಗಿ ಬೆಳೆದಿದೆ. ಅದೂ ಯಾವ ಕ್ಷೇತ್ರವನ್ನು ಬಿಟ್ಟಿಲ್ಲ. ಎಲ್ಲಾ ಕಡೆಯೂ ಆವರಿಸಿ, ಮಾನವ ತನ್ನ ಮಾನವ ಧರ್ಮ, ತನ್ನ ಅಮೂಲ್ಯವಾದ "ಮೌಲ್ಯಗಳನ್ನು" ಸ್ವಾಭಿಮಾನವನ್ನು ಮರೆತು, ಸುಳ್ಳುಗಳ ಸರದಾರರಾಗಿ, ಅನೈತಿಕತೆಯ ಜೀವನ ನಡೆಸುವ ಹಂತಕ್ಕೆ ಬಂದಿದ್ದಾನೆ. "
ಅದನ್ನು ನೈತಿಕತೆಯಿಂದ, ಸ್ವಾಭಿಮಾನದಿಂದ, ತನ್ನ ಮೌಲ್ಯಗಳನ್ನು ಬಲಿಕೊಡದೇ ಸಂಬಳದ ವಿನಃ ಬೇರೆ ಯಾವುದೇ ಹಣವು ಅದು ಪಾಪದ ಹಣ, ಅದು ನಮ್ಮದಲ್ಲ, ನನ್ನ ಶ್ರಮದ ಹಣವಲ್ಲ ಎಂಬ ಮನಸ್ಸಿನಿಂದ ಈ ರಾಜ್ಯ ಸೇವೆ ಮಾಡಿ, ಇದರಿಂದ ತಾನೂ ಲಂಚ ತೆಗೆದುಕೊಂಡೆ ಅನ್ನೋ ಹಾಗೂ ಈ ಲಂಚದ ಹಣದಿಂದ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿದೆ. ಅದ್ದೂರಿ ಮನೆಗಳನ್ನು ಕಟ್ಟಿಸಿದೆ. ಅದ್ದೂರಿಯಾಗಿ ಜೀವಿಸುತ್ತಿದ್ದೇನೆ ಎಂಬ ಪಾಪ ಪ್ರಜ್ಞೆಯಿಂದ ಹೊರಬಂದು ಜನಸಾಮಾನ್ಯರ ನಾಗರೀಕ ಸೌಲಭ್ಯಗಳಿಗೆ ಗಮನ ಕೊಡಿ. ಸರಕಾರದ ಸವಲತ್ತುಗಳನ್ನು ಅವರುಗಳಿಗೆ ತಲುಪಿಸಿ. ಈ ರಾಜ್ಯದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ, ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಸಂಪೂರ್ಣ ನಾಶಮಾಡಿ, ಮಾದರಿಯಾಗಿ, ಆಗ ತಾನೇ ತಾನಾಗಿ ಸಂತೋಷ, ನೆಮ್ಮದಿ, ಆತ್ಮಗೌರವ, ಎಲ್ಲವೂ ತಾನಾಗಿಯೇ ಸಿಗುತ್ತದೆ.
ಈ ಮನವಿ ನಮ್ಮ ರಾಜ್ಯದ - ದೇಶದ ಜನಸಾಮಾನ್ಯರ ಮನಸಿನಾಳದ ನೋವಿನ ವಿನಂತಿ.
ವಿದ್ಯಾವಂತರು, ಬುದ್ದಿವಂತರು, ಆಲೋಚಿಸುವ ಶಕ್ತಿ ತಮಗಿದೆ. ಆಲೋಚಿಸುತ್ತೀರಿ, ತಮ್ಮ ಜೀವನದ ಮೌಲ್ಯಗಳನ್ನು ಕಾಪಾಡಿಕೊಂಡು, ಈ ರಾಜ್ಯದಲ್ಲಿ ಬೆಳೆಯುತ್ತಿರುವ ಭ್ರಷ್ಟಾಚಾರದ ಬೇರುಗಳನ್ನು ನೀವುಗಳೇ ಕಿತ್ತು ಹಾಕುತ್ತೀರಿ ಎಂಬ ಆಶಾಭಾವನೆಯಿಂದ ಕಾಯುತ್ತಿರುತ್ತೇವೆ.
ರಾಜು ವಿನಯ್ ದಾವಣಗೆರೆ
ಆ ಖಾತೆಗಳ ನಿರ್ವಹಣೆಗೆ ನೌಕರ ವೃಂದ. ಕಛೇರಿಯ ಜವಾನ, ಕಿರಿಯ ಸಹಾಯಕ, ಹಿರಿಯ ಸಹಾಯಕ, ದ್ವಿ. ದ. ಗುಮಾಸ್ತ, ಪ್ರ.ದ. ಗುಮಾಸ್ತ, ಅಧಿಕಾರಿ ವರ್ಗಗಳೇ ಎಲ್ಲಾ ಇಲಾಖೆಗಳಲ್ಲೂ ಜನರ ಕೆಲಸಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. "ಸರ್ಕಾರಿ ಕೆಲಸ ದೇವರ ಕೆಲಸ"ದ ಆಧಾರದ ಮೇಲೆ. ರೈತರು, ಜನಸಾಮಾನ್ಯರು ತಾವು ದುಡಿದ ದುಡಿಮೆಯಲ್ಲಿ ಪೈಸೆಗಳಲ್ಲಿ ಸರ್ಕಾರ ವಿಧಿಸುವ ತೆರಿಗೆಗಳನ್ನು (ಯಾವುದೇ ಪದಾರ್ಥ ಕೊಂಡರೂ ಅದಕ್ಕೆ ತೆರಿಗೆ ಕೊಟ್ಟೇ ಕೊಡುತ್ತಾರೆ ನಮ್ಮ ಜನರು) ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜನರ ಹಣ ಸರ್ಕಾರಕ್ಕೆ ನಿರಂತರವಾಗಿ ಹೋಗುತ್ತಲೇ ಇರುತ್ತದೆ. ಈ ಜನರ ಹಣದಿಂದಲೇ ಈ ನಮ್ಮ ರಾಜ್ಯವನ್ನಾಳುವ ಮಂತ್ರಿಗಳು ನಾಗರಿಕ ಸೌಲಭ್ಯಗಳಿಗೆ ಹಣ ವಿನಿಯೋಗಿಸುತ್ತಾರೆ.
ಅದೇ ಹಣದಿಂದಲೇ "ಸರ್ಕಾರಿ ಕೆಲಸ ದೇವರ ಕೆಲಸ" ಅನ್ನೋ ಮನೋಭಾವ ಹೊಂದಿರುವ ನಮ್ಮ ಸರಕಾರಿ ನೌಕರರಿಗೂ ಒಂದೊಂದು ಪೈಸೆ ಸಂಬಳವೂ ಜನರ ತೆರಿಗೆ ಹಣದಿಂದಲೇ ಹೋಗುತ್ತದೆ. ರಾಜ್ಯ ಸರ್ಕಾರವು ಜನರಿಂದ ಸಂಗ್ರಹಿಸುವ ಹಣದಿಂದ ಶೇಕಡ 30-40 ರಷ್ಟು ಹಣವನ್ನು ನೌಕರರ ಸಂಬಳಕ್ಕೆ ವಿನಿಯೋಗಿಸಲಾಗುತ್ತದೆ.
ಸಂಬಳ, ಭತ್ಯೆಗಳು, ಮನೆ ಬಾಡಿಗೆ, ವಾಷಿಂಗ್ ಭತ್ಯೆ, ಪ್ರಯಾಣ ಭತ್ಯೆ, ಹೆರಿಗೆ ಭತ್ಯೆ, ವೈದ್ಯಕೀಯ ಭತ್ಯೆ, ಹೀಗೇ ಎಲ್ಲಾ ಭತ್ಯೆಗಳನ್ನು ಕೊಟ್ಟು, ಕಾಲಕ್ಕೆ ತಕ್ಕಂತೆ ಸಂಬಳದಲ್ಲಿ ಶೇಕಡವಾರು ಹೆಚ್ಚಿಗೆ ಮಾಡಿಕೊಂಡು (ಇದೀಗ ಬಂದ ಸುದ್ದಿಯಂತೆ ಶೇ. 15% ಮೂಲ ವೇತನದಲ್ಲಿ ಸಂಬಳ ಹೆಚ್ಚಳಮಾಡಿ ಸರ್ಕಾರ ಆದೇಶ ಹೊರಡಿಸಿದೆ) ತಮ್ಮ ಜೀವನಕ್ಕೆ ತಮ್ಮ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಿಕೊಂಡಿರುವ ಈ ರಾಜ್ಯದ ಸರಕಾರಿ ನೌಕರರು.
ಇಷ್ಟೆಲ್ಲಾ ಸವಲತ್ತುಗಳನ್ನು ಜನರ ತೆರಿಗೆ ಹಣದಿಂದಲೇ ಪಡೆಯುತ್ತಿದ್ದರೂ ಸಹ " ತಮ್ಮ ಇಲಾಖೆಗಳಲ್ಲಿ ಒಬ್ಬ ಜವಾನನಿಂದ ಹಿಡಿದು, ಎಲ್ಲಾ ವರ್ಗದ ನೌಕರರು, ಲಂಚಕ್ಕೆ ಕೈ ಚಾಚಕೊಂಡೆ "ಭಿಕ್ಷೆ" ಬೇಡುವ ಸ್ಥಿತಿಯಲ್ಲಿ ಜನರಿಂದ ಕೈ ಯೊಡ್ಡಿ, ಜನರಿಂದ ಅವನು ಬಡವನೋ, ಶ್ರೀಮಂತನೋ ಯಾರಿಗೂ ಬೇದ ಭಾವ ತೋರಿಸದೇ, ಎಲ್ಲರಿಂದಲೂ ಲಂಚಕ್ಕೆ ಕೈ ಯೊಡ್ಡುತ್ತಾ, ಕೈ ತುಂಬಾ ಸಂಬಳದ ಜೊತೆಗೆ ಲಂಚವನ್ನು ಪಡೆದು "ಸರ್ಕಾರಿ ಕೆಲಸ ತನ್ನ ಮನೆಯ ಕೆಲಸ" ಎಂಬ ದಾಟಿಯಲ್ಲಿ ಮುನ್ನಡೆಯುತ್ತಿದ್ದಾರೆ ನಮ್ಮ ಸರಕಾರಿ ನೌಕರರು, ಅದೇಕೆ ಹೀಗೆ?
ನಮ್ಮ ಸರ್ಕಾರಿ ನೌಕರ ಬಂಧುಗಳಿಗೆ ಮನಸ್ಸಾಕ್ಷಿಯೇ ಇಲ್ಲವೇ? ಸರಕಾರ ತಾವು ಮಾಡುತ್ತಿರುವ ಶ್ರಮಕ್ಕೆ ಜನರ ತೆರಿಗೆಹಣವನ್ನು ತಮ್ಮ ಕುಟುಂಬಗಳಿಗೆ ಕೊಡುತ್ತಿದೆ. ಅದು ಜನಸಾಮಾನ್ಯರ ಹಣ ಅದಕ್ಕೆ ಸರಿಯಾದ ಮಾನವೀಯತೆ ದೃಷ್ಟಿಯಿಂದ ಜನರ ಕೆಲಸ ಮಾಡಿಕೊಡದೇ ಲಂಚದ ಹಣಕ್ಕೆ ಕೈ ಚಾಚಿ ಅದರಿಂದ ತಮ್ಮ ದುರಾಸೆಯ ಜೀವನ ನಡೆಸಲು ಬಳಸಿಕೊಳ್ಳುತ್ತಿದ್ದಾರೆ. ಆ ಹಣದಿಂದ ಆಸ್ತಿ ಅಂತಸ್ತು, ಮಾಡಿಕೊಂಡು ತಾವೂ ಏನೋ ಸಾಧಿಸದ್ದೇವೆ. ಎಂಬ ಸಾಧನೆಯೊಂದಿಗೆ ಜೀವನ ನಡೆಸುತ್ತಾರಲ್ಲ. ಇದು ಮಾನವ ಧರ್ಮವೇ? ಬಹುತೇಕ ನೌಕರರು ವಿದ್ಯಾವಂತರು ನಮ್ಮ ಸರಕಾರಿ ನೌಕರ ಬಂಧುಗಳು, ಇವರಿಗೆ ಅನ್ಯಾಯ, ಅನೈತಿಕತೆಯ ಬಗ್ಗೆ ತಿಳಿದಿಲ್ಲವೇ ?
ತಾವು ಕೈಯೊಡ್ಡುವ ಲಂಚದ ಹಣವನ್ನು ಒಬ್ಬ ರೈತ, ಬಡವ ಕೊಡುವಾಗ, ತನ್ನ ಒಳಮನಸ್ಸಿನಿಂದ ನೊಂದು, ಬೆಂದು ಆ ಹಣವನ್ನು ಕೊಡುವಾಗ ಶಪಿಸಿಕೊಂಡೆ ಕೊಡುತ್ತಾರಲ್ಲ. ಅವರ ಕಣ್ಣೀರಿನ ಅವರ ನೋವಿನ ಶ್ರಮದ ಹಣ ವನ್ನು ಪಡೆದು ತಮ್ಮ ಸಂಸಾ ರದ ಹೆಂಡತಿ ಮಕ್ಕಳಿಗೆ ವಿನಿಯೋಗಿಸುವಾಗ ಆ ಬಡವನ ಕಣ್ಣೀರಿನ ಒಡಲುರಿಯ ಕಾವು ತಮ್ಮ ಕಣ್ಣ ಮುಂದೆ ಬರುವುದಿಲ್ಲವೇ?
ಒಬ್ಬ ಶ್ರೀಮಂತ, ಆ ಹಣ ಅವ್ಯವಹಾರದಿಂದ ಬಂದ ಹಣ, ಅದರಿಂದ ಎಲ್ಲೆಲ್ಲಿ ಮೋಸ ಮಾಡಿ ಹಣ ಗಳಿಸಿರುತ್ತಾರೋ ? ಹತ್ತು ರೂ ಕೊಟ್ಟು ಸಾವಿರಾರು ಹಣವನ್ನು ದುರ್ಮಾಗದಿಂದ ಗಳಿಸುತ್ತಾರೆ. ಅವರ ಪಾಪದ ಮಾರ್ಗಗಳ ಹಣದಲ್ಲಿ ತಾವುಗಳೂ ಸಹ ತಮ್ಮ ಕುಟುಂಬದೊಂದಿಗೆ ಸಹ ಪಾಲೂದಾರರಾಗುತ್ತಾರೆ. ಆ ಪಾಪಕ್ಕೆ ಪ್ರಾಯಶ್ಚಿತ ಉಂಟೇ,
ಕಚೇರಿ ಕೆಲಸಗಳಲ್ಲಿ ಜವಾನನಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ವರೆಗೂ ಬಹುತೇಕರು ಸಂಬಳಕ್ಕಿಂತ ಲಂಚಕ್ಕೆ ಕೈಯೊಡ್ಡಿಕೊಂಡೆ ದಿನವಿಡೀ ಜಾತಕ ಪಕ್ಷಿಗಳಂತೆ ಕಾಯುತ್ತಾ ತಮ್ಮ ಕೆಲಸಗಳನ್ನು ತಮ್ಮ ಮನಸ್ಸಾಕ್ಷಿಗೆ ಹೆದರದೇ
ರೋಗಿಗಳಿಂದ ಕೈಯೊಡ್ಡುತ್ತಾರೆ. ಅಂಗವಿಕಲರ ಬಳಿ ಕೈಯೊಡ್ಡುತ್ತಾರೆ, ನಿರ್ಗತಿಕ ಮಹಿಳೆಯರ, ವಿಧವಾ ವೇತನ, ವಯಸ್ಸಾದ ಹಿರಿಯರ ವೃದ್ಯಾಪ್ಯ ವೇತನ ಪಡೆಯುವ ಸಂದರ್ಭದಲ್ಲೂ ಕೈಯೊಡ್ಡುತ್ತಾರೆ. ಜನರು ತನ್ನ ಮನೆ ಖರೀದಿಸಿದರೂ, ಮಾರಲು ಹೋದಾಗಲೂ ಅಲ್ಲೂ ಕೈಯೊಡ್ಡುತ್ತಾರೆ. ಬೀದಿಗಳಲ್ಲಿ ಹೊಟ್ಟೆ ಪಾಡಿಗೆ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುವ ವ್ಯಾಪಾರಿಗಳ ಬಳಿ ಕೈಯೊಡ್ಡಿ ನಿಲ್ಲುತ್ತಾರೆ. ಎಲ್ಲೆಲ್ಲಿ ಅವಕಾಶ ಇರುತ್ತೋ ಅಲ್ಲೆಲಲ್ಲಾ ಕೈಯೊಡ್ಡಿ ನಿಲ್ಲುತ್ತಾರೆ.
ಅಲ್ಲಿ ಮಾನವೀಯತೆ ಸತ್ತು ಹೋಗಿ, ತನ್ನ ಕರಾಳ ಮುಖವನ್ನು ತನಗೆ ಅರಿವಿದ್ದೋ, ಅರಿಯದೇಯೋ ಹಣಕ್ಕಾಗಿ ಹಣದ ಬೇಟೆಗಾಗಿ ನಿಂತು ಬಿಡುತ್ತಿದ್ದಾರೆ.
ಯಾವಾಗ ಸರ್ಕಾರಿ ನೌಕರರು ತಮ್ಮ ಆತ್ಮಸಾಕ್ಷಿಯಂತೆ ಕರ್ತವ್ಯವನ್ನು ಜನಸಾಮಾನ್ಯರ ಕೆಲಸಗಳಿಗೆ ಸ್ಪಂದಿಸಿ, ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿಕೊಂಡು ಹೋದಾಗ ಮಾತ್ರ . ಈ ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗುತ್ತದೆ.
ಭ್ರಷ್ಟಾಚಾರದ ಮೂಲ ಬೇರುಗಳೇ ಸರಕಾರಿ ಇಲಾಖೆಗಳು ಆ ಬೇರುಗಳನ್ನು "ನಮ್ಮ ಸರಕಾರಿ ನೌಕರರು ಕಿತ್ತು ಹಾಕಲು ಮನಸ್ಸು ಮಾಡಬೇಕು. ತಾವು ದುಡಿಯುವ ಶ್ರಮಕ್ಕೆ ತಕ್ಕಂತೆ ಜನರ ತೆರಿಗೆ ಹಣದಿಂದ ಪಡೆಯುವ ಸಂಬಳದ ಹಣವೇ ತಮ್ಮ ಆಸ್ತಿ. ಇದರಿಂದ ತನ್ನ ಸಂಸಾರವನ್ನು , ಕುಟುಂಬವನ್ನು ಕಾಪಾಡಿಕೊಂಡು ಹೋಗಬಹುದು. ಯಾವಾಗ ಈ ವಿಚಾರದಲ್ಲಿ ತಾನೂ ತನ್ನನ್ನು ತೊಡಗಿಸಿಕೊಳ್ಳುತ್ತಾನೋ, ಆವತ್ತು ತನ್ನ ತನವನ್ನು ತೋರಿಸಿಕೊಟ್ಟು, ಈ ರಾಜ್ಯದ ಅಭಿವೃದ್ಧಿಗೆ, ಭ್ರಷ್ಟಾಚಾರ ಮುಕ್ತ ರಾಜ್ಯಕ್ಕೆ ತನ್ನ ಶ್ರಮವನ್ನು ಅರ್ಪಿಸುತ್ತಾನೆ."
ಲೋಕಾಯುಕ್ತ, ಜನಲೋಕಪಾಲ, RTI (ಮಾಹಿತಿ ಹಕ್ಕು ಕಾಯ್ದೆ) ಇವುಗಳೇ ಎಷ್ಟೇ ಬಂದರೂ ಸರಕಾರಿ ನೌಕರ ತನ್ನ ಮನಸ್ಸಿನಲ್ಲಿ ತಾನು ಲಂಚದ ಹಣವನ್ನು ತಾನು ಮುಟ್ಟುವುದಿಲ್ಲ. ತನ್ನ ಶ್ರಮಕ್ಕೆ ತಕ್ಕ ಹಾಗೆ ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತೇನೆ. ಅದೇ ತನಗೆ ತನ್ನ ಕುಟುಂಬಕ್ಕೆ ಸಾಕು ಎಂಬ ಮನೋಭಾವನೆ ಬಂದಾಗ ಈ ಎಲ್ಲಾ ಕಾಯ್ದೆಗಳು ಅವಶ್ಯಕತೆ ಇರುವುದೇ ಇಲ್ಲ.
ನಮ್ಮ ಸರಕಾರಿ ನೌಕರ ಬಂಧುಗಳು ಮಾಡುವ ತಪ್ಪುಗಳಿಂದ "ಭ್ರಷ್ಟಾಚಾರ ಅದೆಷ್ಟು ಅಗಾಧವಾಗಿ ಬೆಳೆದಿದೆ. ಅದೂ ಯಾವ ಕ್ಷೇತ್ರವನ್ನು ಬಿಟ್ಟಿಲ್ಲ. ಎಲ್ಲಾ ಕಡೆಯೂ ಆವರಿಸಿ, ಮಾನವ ತನ್ನ ಮಾನವ ಧರ್ಮ, ತನ್ನ ಅಮೂಲ್ಯವಾದ "ಮೌಲ್ಯಗಳನ್ನು" ಸ್ವಾಭಿಮಾನವನ್ನು ಮರೆತು, ಸುಳ್ಳುಗಳ ಸರದಾರರಾಗಿ, ಅನೈತಿಕತೆಯ ಜೀವನ ನಡೆಸುವ ಹಂತಕ್ಕೆ ಬಂದಿದ್ದಾನೆ. "
ಎಲ್ಲೋ ಒಂದು ಕಡೆ "ನಮ್ಮ ಅಣ್ಣಾ ಹಜಾರೆ" ಯಂತಹ ಮುತ್ಸದ್ದಿಗಳು ಭ್ರಷ್ಟಾಚಾರದ ವಿರುದ್ಧ ಚಳುವಳಿಗಳನ್ನು ಮಾಡುತ್ತಾ ಹೋದಷ್ಟು ಅವುಗಳು ಜಾರಿಗೆ ಬರುವಷ್ಟರಲ್ಲಿ ಕಿತ್ತೊಗೆಯಲು ಸಾಧ್ಯವೇ ಆಗದಷ್ಟು ಇನ್ನಷ್ಟು ಬೇರುಗಳು ಗಟ್ಟಿಯಾಗುತ್ತಾ ಹೋಗುತ್ತವೆ.
ಆತ್ಮೀಯ ಸರಕಾರಿ ನೌಕರ ಬಂಧುಗಳೇ, ನಮ್ಮಂತಹ ಜನಸಾಮಾನ್ಯರ ಮನವಿಯೊಂದೇ.
ಈ ರಾಜ್ಯದ, ಈ ದೇಶದ ಸೇವೆ ಮಾಡಲು ನಿಮಗೆ ಒಂದು ಸದಾವಕಾಶ ಸಿಕ್ಕಿದೆ. ಇದು ರಾಜ್ಯ-ರಾಷ್ಟ್ರ ರಕ್ಷಣೆಯ ಹೊಣೆ. ಹೇಗೆ ನಮ್ಮ ದೇಶದ ಗಡಿಯಲ್ಲಿ ನಮ್ಮ ಸೈನಿಕರು, ಕಾಯಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುತ್ತಾರೋ ಹಾಗೆಯೇ ನೀವುಗಳು ಸಹ ಈ ರಾಜ್ಯ-ದೇಶದ ರಕ್ಷಣೆ ಮಾಡುವ ದೇಶಭಕ್ತರೇ, ನೀವುಗಳು ಪ್ರತಿಯೊಬ್ಬ ನೌಕರರು ತಮ್ಮ ಕರ್ತವ್ಯವನ್ನು ಅರಿತು. ತಮ್ಮ ಸೇವೆ ಈ ರಾಜ್ಯದ ಜನಸಾಮಾನ್ಯರಿಗೆ ಅವರ ತೆರಿಗೆ ಹಣದಿಂದ ನಾವು ನಮ್ಮ ಕುಟುಂಬ ಜೀವಿಸುತ್ತಿದೆ. ಅದರ ಋಣ ನಮ್ಮ ಮೇಲಿದೆ. ಈ ರಾಜ್ಯ ತನಗೆ ಈ ರಾಜ್ಯ- ದೇಶ ಸೇವೆ ಮಾಡುವ ಒಂದು ಅವಕಾಶ ನೀಡಿದೆ.ಅದನ್ನು ನೈತಿಕತೆಯಿಂದ, ಸ್ವಾಭಿಮಾನದಿಂದ, ತನ್ನ ಮೌಲ್ಯಗಳನ್ನು ಬಲಿಕೊಡದೇ ಸಂಬಳದ ವಿನಃ ಬೇರೆ ಯಾವುದೇ ಹಣವು ಅದು ಪಾಪದ ಹಣ, ಅದು ನಮ್ಮದಲ್ಲ, ನನ್ನ ಶ್ರಮದ ಹಣವಲ್ಲ ಎಂಬ ಮನಸ್ಸಿನಿಂದ ಈ ರಾಜ್ಯ ಸೇವೆ ಮಾಡಿ, ಇದರಿಂದ ತಾನೂ ಲಂಚ ತೆಗೆದುಕೊಂಡೆ ಅನ್ನೋ ಹಾಗೂ ಈ ಲಂಚದ ಹಣದಿಂದ ತನ್ನ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಿದೆ. ಅದ್ದೂರಿ ಮನೆಗಳನ್ನು ಕಟ್ಟಿಸಿದೆ. ಅದ್ದೂರಿಯಾಗಿ ಜೀವಿಸುತ್ತಿದ್ದೇನೆ ಎಂಬ ಪಾಪ ಪ್ರಜ್ಞೆಯಿಂದ ಹೊರಬಂದು ಜನಸಾಮಾನ್ಯರ ನಾಗರೀಕ ಸೌಲಭ್ಯಗಳಿಗೆ ಗಮನ ಕೊಡಿ. ಸರಕಾರದ ಸವಲತ್ತುಗಳನ್ನು ಅವರುಗಳಿಗೆ ತಲುಪಿಸಿ. ಈ ರಾಜ್ಯದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ, ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ಸಂಪೂರ್ಣ ನಾಶಮಾಡಿ, ಮಾದರಿಯಾಗಿ, ಆಗ ತಾನೇ ತಾನಾಗಿ ಸಂತೋಷ, ನೆಮ್ಮದಿ, ಆತ್ಮಗೌರವ, ಎಲ್ಲವೂ ತಾನಾಗಿಯೇ ಸಿಗುತ್ತದೆ.
ಈ ಮನವಿ ನಮ್ಮ ರಾಜ್ಯದ - ದೇಶದ ಜನಸಾಮಾನ್ಯರ ಮನಸಿನಾಳದ ನೋವಿನ ವಿನಂತಿ.
ಸರಕಾರಿ ನೌಕರ ಗೆಳೆಯರೇ,
ಒಂದೇ ಒಂದು ಸಾರಿ ಆತ್ಮಸಾಕ್ಷಿಯಾಗಿ ಆಲೋಚಿಸಿ, ಎಲ್ಲೋ ಒಂದು ಕಡೆ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯದೇ ಅನ್ಯ ಮಾರ್ಗದಲ್ಲಿ ಜನಸಾಮಾನ್ಯರ ಲಂಚದ ಹಣದಿಂದ ತಾವುಗಳು ನಡೆಸುವ ಜೀವನಕ್ಕೆ ಬೆಲೆ ಎಂಬುದೇ ಇರುತ್ತದೆಯೇ? ವಿದ್ಯಾವಂತರು, ಬುದ್ದಿವಂತರು, ಆಲೋಚಿಸುವ ಶಕ್ತಿ ತಮಗಿದೆ. ಆಲೋಚಿಸುತ್ತೀರಿ, ತಮ್ಮ ಜೀವನದ ಮೌಲ್ಯಗಳನ್ನು ಕಾಪಾಡಿಕೊಂಡು, ಈ ರಾಜ್ಯದಲ್ಲಿ ಬೆಳೆಯುತ್ತಿರುವ ಭ್ರಷ್ಟಾಚಾರದ ಬೇರುಗಳನ್ನು ನೀವುಗಳೇ ಕಿತ್ತು ಹಾಕುತ್ತೀರಿ ಎಂಬ ಆಶಾಭಾವನೆಯಿಂದ ಕಾಯುತ್ತಿರುತ್ತೇವೆ.
ರಾಜು ವಿನಯ್ ದಾವಣಗೆರೆ